ಬುರ್ಜಾಮ್ (ಬುರ್ಜಹೋಮ್)
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶ್ರೀನಗರದಿಂದ ಸುಮಾರರು 11 ಕಿಮೀ ಈಶಾನ್ಯಕ್ಕೆ ಇರುವ ಪ್ರಾಗೈತಿಹಾಸಿಕ ನಿವೇಶನ. ನಾಲ್ಕೈದು ದಶಕಗಳ ಹಿಂದೆ ಯೇಲ್-ಕೇಂಬ್ರಿಜ್ ಪರಿಶೋಧನ ತಂಡದವರು ಇಲ್ಲಿ ಪ್ರಾಯೋಗಿಕ ಉತ್ಖನನ ನಡೆಸಿದ್ದರು. 1959ರ ಅನಂತರ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಇಲ್ಲಿ ಉತ್ಖನನ ನಡೆಸಿತು. ಈ ಉತ್ಖನನಗಳಿಂದ ಇಲ್ಲಿ ನಾಲ್ಕು ಸಾಂಸ್ಕøತಿಕ ಘಟ್ಟಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೊದಲ ಎರಡು ನವಶಿಲಾಯುಗದ ಸಂಸ್ಸøತಿಗೆ ಸೇರಿದವು. ಮೂರನೆಯದು ಬೃಹತ್ ಶಿಲಾಯುಗದ ಸಂಸ್ಕøತಿಯದು. ನಾಲ್ಕನೆಯದು ಚಾರಿತ್ರಿಕ ಕಾಲದ್ದು. (ನೋಡಿ- ಜಮ್ಮು-ಮತ್ತು-ಕಾಶ್ಮೀರ)    
 (ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ